ಅಗ್ನಿಶಾಮಕದಳ ಪರಿವಿಡಿ ಬೆಂಕಿಯನ್ನು ಆರಿಸಲು ಅನುಸರಿಸುವ ರೀತಿಗಳು ಕರ್ನಾಟಕದಲ್ಲಿ ಅಗ್ನಿಶಾಮಕದಳ ಉಲ್ಲೇಖ ಸಂಚರಣೆ ಪಟ್ಟಿ
ಬೆಂಕಿಪ್ರಮಾದಗಳು
ಬೆಂಕಿಕಾರ್ಬನ್ ಟೆಟ್ರಾಕ್ಲೋರೈಡ್
(function()var node=document.getElementById("mw-dismissablenotice-anonplace");if(node)node.outerHTML="u003Cdiv class="mw-dismissable-notice"u003Eu003Cdiv class="mw-dismissable-notice-close"u003E[u003Ca tabindex="0" role="button"u003Edismissu003C/au003E]u003C/divu003Eu003Cdiv class="mw-dismissable-notice-body"u003Eu003Cdiv id="localNotice" lang="kn" dir="ltr"u003Eu003Ctable style="background-color:#FFFFC0; width: 100%; border: 2px solid #FF0000; padding: 5px;"u003Enu003Ctbodyu003Eu003Ctru003Enu003Ctd colspan="2" align="center" style="text-align:center;"u003Eಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ u003Ca href="/wiki/%E0%B2%B8%E0%B2%B9%E0%B2%BE%E0%B2%AF:%E0%B2%B2%E0%B2%BF%E0%B2%AA%E0%B3%8D%E0%B2%AF%E0%B2%82%E0%B2%A4%E0%B2%B0" title="ಸಹಾಯ:ಲಿಪ್ಯಂತರ"u003Eಈ ಪುಟ ನೋಡಿ.u003C/au003Enu003C/tdu003Eu003C/tru003Eu003C/tbodyu003Eu003C/tableu003Eu003C/divu003Eu003C/divu003Eu003C/divu003E";());
ಅಗ್ನಿಶಾಮಕದಳ
Jump to navigation
Jump to search
ಬೆಂಕಿಯಿಂದ ಉಂಟಾಗುವ ಅನಾಹುತಗಳನ್ನು ತಡೆಯಲು ಅದರೊಡನೆ ಹೋರಾಡಿ ಅದನ್ನು ಆರಿಸುವುದಕ್ಕೆಂದೇ ವಿಶೇಷವಾಗಿ ರಚನೆಯಾಗಿರುವ ಸಿಬ್ಬಂದಿಗೆ ಈ ಹೆಸರಿದೆ. ಸಾಮಾನ್ಯವಾಗಿ ಇಂಥ ದಳ ದೊಡ್ಡ ದೊಡ್ಡ ಪಟ್ಟಣಗಳಲ್ಲಿದ್ದು ತನ್ನ ಸೇವೆಯನ್ನು ಪಟ್ಟಣಗಳಿಗೆ ಮಾತ್ರವಲ್ಲದೆ ಸುತ್ತಮುತ್ತಲ ಪ್ರದೇಶಗಳಿಗೂ ವಿಸ್ತರಿಸುತ್ತದೆ. ಆಕಸ್ಮಿಕದಿಂದ ಉಂಟಾದ ಬೆಂಕಿಯನ್ನು ಆರಿಸುವುದು ಮಾತ್ರವಲ್ಲದೆ ಇತರೆಡೆಗಳಿಗೆ ಹರಡದಂತೆಯೂ ಈ ದಳ ನೋಡಿಕೊಳ್ಳುತ್ತದೆ. ಈ ದಳದ ನೆರವಿನಿಂದಾಗಿ ಬೆಂಕಿ ಅಪಘಾತದಿಂದ ಉಂಟಾಗುವ ಪ್ರಾಣಹಾನಿ, ಆಸ್ತಿ ಪಾಸ್ತಿಗಳ ನಷ್ಟ ಕಡಿಮೆಯಾಗಲವಕಾಶವಿದೆ.
ಪರಿವಿಡಿ
೧ ಬೆಂಕಿಯನ್ನು ಆರಿಸಲು ಅನುಸರಿಸುವ ರೀತಿಗಳು
೧.೧ ವಿಧಾನ ೧
೧.೨ ವಿಧಾನ ೨
೨ ಕರ್ನಾಟಕದಲ್ಲಿ ಅಗ್ನಿಶಾಮಕದಳ
೩ ಉಲ್ಲೇಖ
ಬೆಂಕಿಯನ್ನು ಆರಿಸಲು ಅನುಸರಿಸುವ ರೀತಿಗಳು
ವಿಧಾನ ೧
ಬೆಂಕಿಯನ್ನಾರಿಸಲು ಮುಖ್ಯವಾಗಿ ಬಳಸುವ ವಸ್ತುವೆಂದರೆ ನೀರು, ದೊಡ್ಡ ದೊಡ್ಡ ಅಗ್ನಿಪ್ರಮಾದಗಳನ್ನು ಹತೋಟಿಗೆ ತರಲು ತಣ್ಣೀರನ್ನು ಅಧಿಕ ಪ್ರಮಾಣದಲ್ಲಿ ಬಳಸಬೇಕಾಗುತ್ತದೆ. ನೀರಿನ ಸತತಧಾರೆಯಿಂದ ಮಾತ್ರ ಇಂಥ ಅಗ್ನಿಪ್ರಮಾದಗಳನ್ನು ತಡೆಯಲು ಸಾಧ್ಯ. ಅಧಿಕ ಒತ್ತಡದಲ್ಲಿ ಮತ್ತು ಹೆಚ್ಚು ಪ್ರಮಾಣದಲ್ಲಿ ನೀರನ್ನು ಬೆಂಕಿಯ ಮೇಲೆ ಎರಚಲು ನವೀನ ರೀತಿಯ ನೀರೆತ್ತುವ ಯಂತ್ರಗಳನ್ನು ಅಗ್ನಿಶಾಮಕದಳದವರು ಬಳಸುತ್ತಾರೆ. ಬೆಂಕಿಯ ಅಪಘಾತ ಒದಗಿದ ಸ್ಥಳದ ಬಳಿ ಬಾವಿಯಾಗಲೀ ಕೆರೆಯಾಗಲೀ ಇದ್ದರೆ ಬೆಂಕಿಯನ್ನಾರಿಸುವ ಕಾರ್ಯ ಸುಲಭವಾಗುತ್ತದೆ.
ವಿಧಾನ ೨
ಅಪಘಾತ ಸ್ಥಳದಲ್ಲಿ ನೀರಿನ ಸೌಕರ್ಯವಿಲ್ಲದಿದ್ದರೆ ಬೆಂಕಿಯನ್ನಾರಿಸುವುದು ಕಷ್ಟ. ಇಂಥ ಸನ್ನಿವೇಶಗಳಲ್ಲಿ ಆಧುನಿಕ ರೀತಿಯಲ್ಲಿ ತಯಾರಿಸಲಾಗಿರುವ ಬೆಂಕಿ ಆರಿಸುವ ಸಾಧನಗಳನ್ನು (ಫೈರ್ ಎಕ್ಸ್‌ಟಿಂಗ್ವಿಷರ್ಸ್) ಉಪಯೋಗಿಸಲಾಗುತ್ತದೆ. ಈ ಸಾಧನದಲ್ಲಿ ಇಂಗಾಲಾಮ್ಲ ಅನಿಲವನ್ನು ಉತ್ಪಾದಿಸಿ ಅದನ್ನು ಬೆಂಕಿ ಎಡೆಗೆ ಎರಚುವುದರಿಂದ ಬೆಂಕಿಯನ್ನು ಶಮನ ಮಾಡಬಹುದು. ಈ ತರದ ಆರಿಸುವ ಸಾಧನವನ್ನು ಸಾಮಾನ್ಯವಾಗಿ ಕಾರ್ಖಾನೆ, ಚಿತ್ರಮಂದಿರ, ಗ್ರಂಥಾಲಯ, ಪ್ರಯೋಗಾಲಯ ವಸ್ತುಸಂಗ್ರಹಾಲಯ ಮುಂತಾದೆಡೆಗಳಲ್ಲಿ ಇಟ್ಟಿರುತ್ತಾರೆ. ಗ್ಯಾಸೊಲಿನ್, ಆಲ್ಕೊಹಾಲ್, ಎಣ್ಣೆ, ಬಣ್ಣ ಮತ್ತು ವಿದ್ಯುಚ್ಛಕ್ತಿಯಿಂದುಂಟಾದ ಬೆಂಕಿಯನ್ನು ಆರಿಸಲು ಇಂಥ ಉಪಕರಣವನ್ನುಪಯೋಗಿಸುತ್ತಾರೆ. ಇದಲ್ಲದೆ ಕೆಲವು ರಾಸಾಯನಿಕ ಮಾರ್ಜಕಗಳನ್ನು ನೀರಿಗೆ ಬೆರೆಸಿ, ಕಾಡುಗಿಚ್ಚು ಮತ್ತು ಇತರ ಸಾಮಾನ್ಯ ಬೆಂಕಿ ಪ್ರಮಾದಗಳನ್ನು ಆರಿಸುತ್ತಾರೆ. ದ್ರವರೂಪದ ಕಾರ್ಬನ್ ಟೆಟ್ರಾಕ್ಲೋರೈಡ್ ಸಹ ಬಳಕೆಯಲ್ಲಿದೆ.
ಕರ್ನಾಟಕದಲ್ಲಿ ಅಗ್ನಿಶಾಮಕದಳ
ಕರ್ನಾಟಕ ರಾಜ್ಯದ ವಿವಿದೆಡೆ ಈ ಸೇವೆ ಲಭ್ಯವಿದೆ. ಯಾವುದೇ ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಬಹುದು. [೧]
ಉಲ್ಲೇಖ
↑ [೧]Karnataka State Fire and Emergency Services Department
ವರ್ಗ:
- ಬೆಂಕಿಪ್ರಮಾದಗಳು
(window.RLQ=window.RLQ||[]).push(function()mw.config.set("wgPageParseReport":"limitreport":"cputime":"0.032","walltime":"0.039","ppvisitednodes":"value":31,"limit":1000000,"ppgeneratednodes":"value":0,"limit":1500000,"postexpandincludesize":"value":0,"limit":2097152,"templateargumentsize":"value":0,"limit":2097152,"expansiondepth":"value":2,"limit":40,"expensivefunctioncount":"value":0,"limit":500,"unstrip-depth":"value":0,"limit":20,"unstrip-size":"value":85,"limit":5000000,"entityaccesscount":"value":0,"limit":400,"timingprofile":["100.00% 0.000 1 -total"],"cachereport":"origin":"mw1339","timestamp":"20190410055539","ttl":2592000,"transientcontent":false););"@context":"https://schema.org","@type":"Article","name":"u0c85u0c97u0ccdu0ca8u0cbfu0cb6u0cbeu0caeu0c95u0ca6u0cb3","url":"https://kn.wikipedia.org/wiki/%E0%B2%85%E0%B2%97%E0%B3%8D%E0%B2%A8%E0%B2%BF%E0%B2%B6%E0%B2%BE%E0%B2%AE%E0%B2%95%E0%B2%A6%E0%B2%B3","sameAs":"http://www.wikidata.org/entity/Q6498663","mainEntity":"http://www.wikidata.org/entity/Q6498663","author":"@type":"Organization","name":"Contributors to Wikimedia projects","publisher":"@type":"Organization","name":"Wikimedia Foundation, Inc.","logo":"@type":"ImageObject","url":"https://www.wikimedia.org/static/images/wmf-hor-googpub.png","datePublished":"2016-10-16T18:44:53Z","dateModified":"2016-10-16T19:08:06Z","image":"https://upload.wikimedia.org/wikipedia/commons/8/81/Knoxfireengine.jpg"(window.RLQ=window.RLQ||[]).push(function()mw.config.set("wgBackendResponseTime":122,"wgHostname":"mw1265"););